ನಿಜವಾದ ಶಾಂತಿಯನ್ನು ಅನುಭವಿಸುವುದು ಹೇಗೆ ?

ನಿಜವಾದ ಶಾಂತಿಯನ್ನು ಅನುಭವಿಸುವುದು ಹೇಗೆ ?

ನೊಬೆಲ್ ಶಾಂತಿ ಪ್ರಶಸ್ತಿ

ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಡಿಷ್ ಕೈಗಾರಿಕೋದ್ಯಮಿ ಮತ್ತು ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಿಂದ 1895 ರಲ್ಲಿ ಸ್ಥಾಪಿಸಲಾಯಿತು. ನೊಬೆಲ್ ಅವರ ಇಚ್ಛೆಯ ಪ್ರಕಾರ, ಹಿಂದಿನ ವರ್ಷದಲ್ಲಿ “ರಾಷ್ಟ್ರಗಳ ನಡುವಿನ ಭ್ರಾತೃತ್ವಕ್ಕಾಗಿ, ಯುಧ್ಧ ಸೈನ್ಯಗಳ ನಿರ್ಮೂಲನೆಗಾಗಿ ಮತ್ತು ಶಾಂತಿಯ ಕಾಪಾಡುವಿಕೆ ಮತ್ತು ಸ್ಥಾಪನೆಗಾಗಿ ಹೆಚ್ಚು ಅಥವಾ ಅತ್ಯುತ್ತಮವಾದ ಕೆಲಸ” ಮಾಡಿದವರಿಗೆ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರತಿ ವರ್ಷವೂ ನೀಡಲಾಗುತ್ತಿದ್ದರೂ, 19 ಸಂದರ್ಭಗಳಲ್ಲಿ, ಪ್ರಶಸ್ತಿಯ ವ್ಯಾಖ್ಯಾನಕ್ಕೆ ಸರಿಹೊಂದುವ ಯಾವುದೇ ವ್ಯಕ್ತಿ ಇರದ/ ಸಿಗದ ಕಾರಣದಿಂದಾಗಿ ಯಾರಿಗೂ ಕೊಡಲಾಗಿಲ್ಲ.

ನಿಜವಾದ ಶಾಂತಿ ಎಂದರೇನು?

ಇಂದಿನ ಜಗತ್ತಿನಲ್ಲಿ ಶಾಂತಿಯನ್ನು ಜನರು ಹೆಚ್ಚಾಗಿ ಹುಡುಕುತ್ತಾರೆ. ರಾಷ್ಟ್ರಗಳು, ಕುಟುಂಬಗಳು ಅಥವಾ ವ್ಯಕ್ತಿಗಳು, ಶ್ರೀಮಂತರು ಅಥವಾ ಬಡವರು, ಎಲ್ಲರೂ ಶಾಂತಿಯ ಅನ್ವೇಷಣೆಯಲ್ಲಿದ್ದಾರೆ. ಆದರೆ ಶಾಂತಿಯನ್ನು ಬಯಸುವ ಎಲ್ಲರಿಗೂ ಅದು ಸಿಗುತ್ತಿಲ್ಲ.

ನಿಜವಾಗಿಯೂ ಶಾಂತಿ ಎಂದರೇನು? ವೈಯಕ್ತಿಕವಾಗಿ, ಒಬ್ಬ ವ್ಯಕ್ತಿಯ ಮನಸ್ಸಿನ ಶಾಂತ ಸ್ಥಿತಿ, ಆಂತರಿಕ ಅಥವಾ ಬಾಹ್ಯ ವಿಷಯಗಳಿಂದ ಕೆಡದೆ ಇರುವುದೇ ಆಗಿದೆ. ಜವಾಹರಲಾಲ್ ನೆಹರು ಒಮ್ಮೆ ಹೇಳಿದರು, “ಶಾಂತಿಯು ರಾಷ್ಟ್ರಗಳ ಸಂಬಂಧವಲ್ಲ. ಇದು ಆತ್ಮದ ಪ್ರಶಾಂತತೆಯಿಂದ ಉಂಟಾಗುವ ಮನಸ್ಸಿನ ಸ್ಥಿತಿಯಾಗಿದೆ. ಶಾಂತಿಯು ಕೇವಲ ಯುದ್ಧದ ಅನುಪಸ್ಥಿತಿಯಲ್ಲ. ಇದು ಒಂದು ಮನಸ್ಥಿತಿ. ಶಾಂತಿಯುತ ಜನರಿಗೆ ಮಾತ್ರ ಶಾಶ್ವತ ಶಾಂತಿ ಸಿಗುತ್ತದೆ.”

ನಾನು ಶಾಂತಿಯುತ ವ್ಯಕ್ತಿಯಾಗುವುದು ಹೇಗೆ?

ಆದರೆ ನಾನು ಶಾಂತಿಯುತ ವ್ಯಕ್ತಿಯಾಗುವುದು ಹೇಗೆ? ನಾನು ಅದನ್ನು ಎಲ್ಲಿಂದಾದರೂ ಪಡೆಯಬಹುದೇ? ಆಲ್ಬರ್ಟ್ ಐನ್‌ಸ್ಟೈನ್ ಹೇಳಿದರು: “ಶಾಂತಿಯನ್ನು ಬಲದಿಂದ ಸಾಧಿಸಲಾಗುವುದಿಲ್ಲ. ತಿಳುವಳಿಕೆಯಿಂದ ಮಾತ್ರ ಇದನ್ನು ಸಾಧಿಸಬಹುದು.”

ಜಗತ್ತಿಗೆ ಶಾಂತಿಯನ್ನು ತರುವಲ್ಲಿ ಯಾರಾದರೂ ಯಶಸ್ವಿಯಾಗಿದ್ದಾರೆಯೇ?

ಹೌದು, ಅದು ಬೇರೆ ಯಾರೂ ಅಲ್ಲ ಕರ್ತನಾದ ಯೇಸು ಕ್ರಿಸ್ತನೇ. ಭೂಮಿಯಲ್ಲಿ ಆತನಿದ್ದ ಕಾಲದಲ್ಲಿ, ತೊಂದರೆಗೊಳಗಾದ ಮನಸ್ಸಿನವರಿಗೆ ನಿಜವಾದ ಶಾಂತಿಯನ್ನು ಒದಗಿಸಿದನು. ಆತನು ಇಹಲೋಕ ತ್ಯಜಿಸಿದಾಗ ನಮಗಾಗಿ ತನ್ನ ಶಾಂತಿಯನ್ನು ಬಿಟ್ಟು ಹೋದನು.

ಯೇಸು ಹೇಳಿದ್ದು, “ನೀವು ನನ್ನಲ್ಲಿದ್ದು ಮನಶ್ಯಾoತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.” ಯೋಹಾನ 16:33

ಯೇಸು ಮತ್ತೂ ಹೇಳಿದ್ದು, “ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ.” ಯೋಹಾನ 14:27

ಯೇಸು ನೀಡುವ ಈ ನಿಜವಾದ ಶಾಂತಿಯನ್ನು ನೀವು ಹೇಗೆ ಅನುಭವಿಸಬಹುದು? ಯೇಸುವಿನ ಬಳಿಗೆ ಬನ್ನಿ, ನಿಮ್ಮ ಪಾಪಗಳನ್ನು ಒಪ್ಪಿಕೊಂಡು, ಆತನನ್ನು ನಿಮ್ಮ ಕರ್ತನು ಮತ್ತು ರಕ್ಷಕನನ್ನಾಗಿ ಸ್ವೀಕರಿಸಿ. ಆಗ, “ಎಲ್ಲಾ ಗ್ರಹಿಕೆಯನ್ನು ಮೀರುವ ದೇವ ಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” ಫಿಲಿಪ್ಪಿ 4:7