ನಿಜವಾದ ಸ್ವಾತಂತ್ರ್ಯ ಎಂದರೇನು? What is freedom?

ಸ್ವಾತಂತ್ರ್ಯ

ಸ್ವಾತಂತ್ರ್ಯದ ಅರ್ಥMeaning of freedom

ನಮಗೆ ಸ್ವಾತಂತ್ರ್ಯ ಎಂದರೆ ನಾವು ಆಯ್ಕೆ ಮಾಡಿದ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸಲು, ಮಾತನಾಡಲು ಮತ್ತು ಬದುಕಲು ಸ್ವಾತಂತ್ರ್ಯ ಎಂದಾಗಿದೆ. ತನ್ನ ಪಂಜರದಿಂದ ಬಿಡುಗಡೆಯಾದ ಹಕ್ಕಿ ಅಥವಾ ಸೆರೆಮನೆಯಿಂದ ಬಿಡುಗಡೆಯಾದ ಖೈದಿ ಕೂಡ ಒಂದು ನಿರ್ದಿಷ್ಟ ರೀತಿಯ ಸ್ವಾತಂತ್ರ್ಯವನ್ನು ಅನುಭವಿಸುತ್ತಾನೆ.

ಆದರೆ ಇದು ಸ್ವಾತಂತ್ರ್ಯದ ಸಂಪೂರ್ಣ ಅರ್ಥವೇ?

ಹೌದು, ಇದು ರಾಜಕೀಯ ಸ್ವಾತಂತ್ರ್ಯದ ಅರ್ಥವಾಗಿರಬಹುದು. ಆದರೆ ನೈತಿಕ ಅಥವಾ ಆತ್ಮೀಕ ಸ್ವಾತಂತ್ರ್ಯದಂತಹ ಅನೇಕ ಇತರ ರೀತಿಯ ಸ್ವಾತಂತ್ರ್ಯಗಳು ಇವೆ. ರಾಜಕೀಯ ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ನಾವು ನೈತಿಕವಾಗಿ ಮತ್ತು ಆತ್ಮಿಕವಾಗಿ ಸ್ವತಂತ್ರರಾಗಿದ್ದೇವೆಯೇ? ಬಾಹ್ಯ ಸ್ವಾತಂತ್ರ್ಯಕ್ಕಿಂತ ಸಂಪೂರ್ಣ ಸ್ವಾತಂತ್ರ್ಯವನ್ನು ಸಾಧಿಸುವಲ್ಲಿ ನಾವು ಹೆಚ್ಚು ಸಂತೋಷಪಡಬೇಕು. ನಾವೆಲ್ಲರೂ ಮೂಲತಹ  ಪಾಪದ ಬಂಧನದಲ್ಲಿದ್ದೇವೆ ಮತ್ತು ನಾವು ಬಯಸಿದರೂ ಈ ಬಂಧನದಿಂದ ಮುಕ್ತರಾಗಲು ನಮಗೆ ಸಾಧ್ಯವಾಗುತ್ತಿಲ್ಲ ಏಕೆಂದರೆ ನಾವು ಪಾಪಿಗಳಾಗಿ ಹುಟ್ಟಿದ್ದೇವೆ ಮತ್ತು ಪಾಪವು ನಮ್ಮ ವ್ಯಕ್ತಿತ್ವದ ಪ್ರತಿಯೊಂದು ಅಂಶದಲ್ಲೂ ಇದೆ. ದೇವರು ತನ್ನ ಮಹಿಮೆ ಮತ್ತು ಸಹಭಾಗಿತ್ವಕ್ಕಾಗಿ ಮನುಷ್ಯನನ್ನು ಸೃಷ್ಟಿಸಿದನು ಎಂದು ಬೈಬಲ್ ಹೇಳುತ್ತದೆ. ಮನುಷ್ಯನು ದೇವರೊಂದಿಗೆ ಶುದ್ಧ ಮತ್ತು ಮಧುರವಾದ ಸಹವಾಸದಲ್ಲಿದ್ದಾಗ ಪಾಪಕ್ಕೆ ಗುಲಾಮನಾಗಿರಲಿಲ್ಲ.

ಇನ್ನೂ ಬಂಧಿಸಲ್ಪಟ್ಟಿದ್ದೀರಾ ?

ಆದರೆ ನಮ್ಮ ಆದಿ ತಂದೆತಾಯಿಗಳು ದೇವರ ಆಜ್ಞೆಗೆ ಅವಿಧೇಯರಾದರು ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಂಡರು. ಅಂದಿನಿಂದ ಇಡೀ ಮಾನವ ಜನಾಂಗವು ಪಾಪದ ಗುಲಾಮಗಿರಿಯಲ್ಲಿದೆ. ಆದಿ ತಂದೆತಾಯಿಗಳು ದೇವರ ಸೃಷ್ಟಿಯ ಉದ್ದೇಶವನ್ನು ತಿರಸ್ಕರಿಸಿ ಪಾಪವನ್ನು ಆರಿಸಿಕೊಂಡರು ಮತ್ತು ಪರಿಣಾಮವಾಗಿ, ಇಡೀ ಮಾನವ ಜನಾಂಗವು ದೇವರ ಸಾಂಗತ್ಯವನ್ನು  ಕಳೆದುಕೊಂಡಿತು ಮತ್ತು ಪಾಪಕ್ಕೆ ಒಳಪಟ್ಟಿದೆ.

ಪಾಪದ ಫಲವು  ದೈಹಿಕ ಸಾವು ಮಾತ್ರವಲ್ಲ, ಆತ್ಮಿಕ ಮತ್ತು ಶಾಶ್ವತ ಮರಣವೂ ಆಗಿದೆ. ಆದುದರಿಂದಲೇ  ಮನುಷ್ಯನು ಆತ್ಮೀಕವಾಗಿ ಸತ್ತಿದ್ದಾನೆ ಮತ್ತು ಇಂದು ದೇವರಿಂದ ದೂರವಾಗಿದ್ದಾನೆ.

ನಿಜವಾದ ಸ್ವಾತಂತ್ರ್ಯಕ್ಕೆ ಮಾರ್ಗ 

ಕರ್ತನಾದ ಯೇಸು ಕ್ರಿಸ್ತನು ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ಶಿಲುಬೆಯ ಮೇಲೆ ತನ್ನ ಪ್ರಾಣವನ್ನು ಕೊಟ್ಟನು ಮತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದನು, ಆದ್ದರಿಂದ ಆತನನ್ನು ನಂಬುವವನು ನಾಶವಾಗುವುದಿಲ್ಲ ಆದರೆ ನಿತ್ಯಜೀವವನ್ನು ಹೊಂದುತ್ತಾನೆ. ಕರ್ತನಾದ ಯೇಸುವನ್ನು ಆಶ್ರಯಿಸುವವರು ತಮ್ಮ ಜೀವನದಲ್ಲಿ ನಿಜವಾದ ಮತ್ತು ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಬಹುದು ಮತ್ತು ಅನುಭವಿಸಬಹುದು.