ಸತ್ಯವು ನಿಮ್ಮನ್ನು ಬಿಡುಗಡೆಗೊಳಿಸುತ್ತದೆ!

sathya

ಯೇಸು ಅವನಿಗೆ, “ನಾನೇಮಾರ್ಗವೂಸತ್ಯವೂಜೀವವೂ ಆಗಿದ್ದೇನೆ,” ಎಂದು ಹೇಳಿದನು. – ಯೋಹಾನ 14: 6

ಇತಿಹಾಸದುದ್ದಕ್ಕೂ ನೋಡುವುದಾದರೆ ಯಾರೂ ಇಂತಹ ಅಧಿಕೃತ ಮತ್ತು ದೃಢವಾದ ಹೇಳಿಕೆಯನ್ನು ನೀಡಿಲ್ಲ. ಅನೇಕರು ದಾರಿತೋರಿಸಲು ಪ್ರಯತ್ನಿಸಿದರು, ಕೆಲವರು ಸತ್ಯವನ್ನುಅನ್ವೇಷಿಸಲು ಪ್ರಯತ್ನಿಸಿದರು ಮತ್ತು ಬಹಳಜನರು‘ಜೀವನ’ ಮತ್ತು ಅದರ ರಹಸ್ಯಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯೇಸುವನ್ನು ಹೊರತುಪಡಿಸಿ ಯಾರೂ ‘ನಾನೇಮಾರ್ಗವೂಸತ್ಯವೂಜೀವವೂ ಆಗಿದ್ದೇನೆ’ ಎಂದು ಹೇಳಲಿಲ್ಲ.

ನೀವು ಈ ಯೇಸುವನ್ನು ತಿರಸ್ಕರಿಸಲೂಬಹುದು,ಸ್ವೀಕರಿಸಲೂಬಹುದುನಿಮ್ಮ ಆಯ್ಕೆಏನೇ ಆಗಿರಬಹುದು, ಆದರೆ ನೀವು ಆತನನ್ನುನಿರಾಕರಿಸಲು ಸಾಧ್ಯವಿಲ್ಲ.

“ನೀವು ಸತ್ಯವನ್ನುತಿಳಿದುಕೊಳ್ಳುವಿರಿ ಮತ್ತು ಸತ್ಯವುನಿಮ್ಮನ್ನುಬಿಡುಗಡೆಮಾಡುವದು.” – ಯೋಹಾನ 8:32

ಹಾಗಾದರೇ ಯಾವುದರಿಂದ ಬಿಡುಗಡೆ?

  • ಸಂಪ್ರದಾಯಗಳು, ಸಂಸ್ಕೃತಿಮತ್ತುಹವ್ಯಾಸಗಳೆಂಬಬಂಧನಗಳು
  • ಪರಿಪೂರ್ಣವಾಗಿಲ್ಲ ಮತ್ತು ಏನೋ ಕಳೆದುಕೊಂಡತಪ್ಪಿತಸ್ಥ ಭಾವನೆ.
  • ಸಾವು, ಮರಣಾನಂತರದ ಜೀವನಮತ್ತುಅರಿಯದಭವಿಷ್ಯದ ಬಗ್ಗೆ ಭಯ.
  • ಖಾಲಿತನ ಮತ್ತು ಒಂಟಿತನ – ಜೀವನದಲ್ಲಿಏನನ್ನಾದರೂಕಳೆದುಕೊಂಡಿರುವ ಭಾವನೆಮತ್ತು ಜೀವನದ ಅಂತ್ಯದವರೆಗೆ ವಿಸ್ತರಿಸಿರುವ ನಿರ್ವಾತವನ್ನುವ್ಯರ್ಥಪ್ರಯತ್ನಗಳಿಂದ ಈ ತುಂಬಲು ಪ್ರಯತ್ನಿಸುತ್ತದೆ.
  • ಸಮೃದ್ಧಿ,ಸ್ವಾಸ್ಥ್ಯ ಮತ್ತು ಒಳ್ಳೆಯ ಪ್ರಜ್ಞೆಯುತೃಪ್ತಿಯಾಗುವಂತೆತಣಿಸುವಿಕೆ.

ಸೃಷ್ಟಿಕರ್ತನಾದದೇವರಸಾಮೀಪ್ಯ ಮತ್ತು ಶಾಂತಿ ಪಡೆಯಲು ನಿಷ್ಪ್ರಯೋಜಕಪ್ರಯತ್ನಗಳು.

ಮನುಷ್ಯನಲ್ಲಿಬಂಧನ ಮತ್ತು ಕಳೆದುಹೋದಪ್ರಜ್ಞೆ ಇದೆ. ಹಾಗೆಯೇ ನಾವು ಕಳೆದುಹೋದಜಗತ್ತಿನಲ್ಲಿಬದುಕುತ್ತಿದ್ದೇವೆ ಎಂಬ ಅಂಶದಲ್ಲಿ ಈ ನಷ್ಟವುಬೇರೂರಿದೆ ಎಂದು ಬೈಬಲ್ ನಮಗೆ ಕಲಿಸುತ್ತದೆ. ನಾವೆಲ್ಲರೂ ಪಾಪಸ್ವಭಾವದಸಾಕ್ರಾಮಿಕಸೊಂಕಿಗೆಒಳಗಾಗಿದ್ದೇವೆ: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” (ರೋಮಾಪುರದವರಿಗೆ 3:23).  ನಮ್ಮ ಪ್ರಾಮಾಣಿಕಪ್ರಯತ್ನಗಳಹೊರತಾಗಿಯೂ, ನಮ್ಮ ಸೃಷ್ಟಿಕರ್ತನಿಂದ ನಮ್ಮನ್ನು ಬೇರ್ಪಡಿಸುವಅಪರಾಧದಹೊರೆಯಿಂದ ನಮ್ಮನ್ನು ಮುಕ್ತಗೊಳಿಸಲು ನಮಗೆ ಸಾಧ್ಯವಾಗುತ್ತಿಲ್ಲ.

ದೇವರು ನಮ್ಮ ಪಾಪದಿಂದ ಉಂಟಾಗುವಸಂದಿಗ್ಧತೆಯನ್ನುಪರಿಹರಿಸಲು ತನ್ನ ಮಗನನ್ನುಕಳುಹಿಸಿದನು. “ದೇವರುಲೋಕದಮೇಲೆಎಷ್ಟೋಪ್ರೀತಿಯನ್ನಿಟ್ಟು ತನ್ನ ಒಬ್ಬನೇಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂನಾಶವಾಗದೆ ಎಲ್ಲರೂ ನಿತ್ಯಜೀವವನ್ನುಪಡೆಯಬೇಕೆಂದುಆತನನ್ನು ಕೊಟ್ಟನು” (ಯೋಹಾನ 3:16). ಯೇಸು ಕ್ರಿಸ್ತನು ಶಿಲುಬೆಯಲ್ಲಿಮರಣಹೊಂದುವದರಮೂಲಕ ನಮಗೆ ದೇವರಮಾರ್ಗವನ್ನು ತೋರಿಸಿದನು. ಅವನು ತನ್ನ ರಕ್ತವನ್ನು ಚೆಲ್ಲುವ ಮೂಲಕ ನಮ್ಮ ರಕ್ಷಣೆಯನ್ನು ನೀಡಿದನು. ಅವನಸಾವು ಮತ್ತು ಪುನರುತ್ಥಾನವು ದೇವರು ಮತ್ತು ಮಾನವೀಯತೆಯ ನಡುವೆವಿನೂತನವಾದ ಮತ್ತು ಶಾಶ್ವತವಾದಒಡಂಬಡಿಕೆಯನ್ನುಂಟುಮಾಡಿತು.

ಯೇಸು ಕ್ರಿಸ್ತನನ್ನು ವೈಯಕ್ತಿಕವಾಗಿ ನಂಬುವುದೇದೇವರಮಾರ್ಗವಾಗಿದೆ.  ನೀವು ಇಂದು ನಿಮ್ಮ ಜೀವನ ಮತ್ತು ಹೃದಯವನ್ನು ಕ್ರಿಸ್ತನಿಗೆ ಒಪ್ಪಿಸುವಮೂಲಕಅವನ ಹತ್ತಿರ ಬರಬಹುದು. ಬೈಬಲ್ ಹೇಳುತ್ತದೆ: “ಯಾರಾರುಆತನನ್ನುಅಂಗೀಕರಿಸಿದರೋ, ಅಂದರೆ ಆತನಹೆಸರಿನಲ್ಲಿನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವಅಧಿಕಾರ ಕೊಟ್ಟನು.” (ಯೋಹಾನ 1:12).

ಯೇಸುವೇಸತ್ಯ. ಅವನನ್ನುನಂಬಿರಿ ಮತ್ತು ಅವನೇನಿಮ್ಮನ್ನುಸತ್ಯವಾಗಿಯೂಮುಕ್ತಗೊಳಿಸುತ್ತಾನೆ!